Nanna Manave Neenu Hedharadhiru
ನನ್ನ ಮನವೇ ನೀನು ಹೆದರದಿರು
ಯೇಸುವು ನಿನ್ನೊಂದಿಗಿರುವ
ಆತ ತೂಕಡಿಸದೆ ನಿದ್ರಿಸದೆ
ಸದಾ ನಿನ್ನನ್ನು ಕಾಯುವನು (2)
ಧಿಗ್ಬ್ರಮೇ ಬೇಡ ಭಯ ಪಡ ಬೇಡ
ಎಂದೆಂದು ಆತ ನಿನ್ ಜೊತೆಗಿರುವ
ತನ್ನ ಧರ್ಮದ ಬಲಗಯ್ಯ ನೀಡೀ ಆತ
ಸದಾ ನಿನ್ ಸಹಾಯಕ್ಕಿರುವನು
ಕಾರ್ಗತ್ತಲಿನ ಕಣಿವೆಯಲ್ಲಿ
ನಡೆವಾಗ ಆತ ನಿನ್ ಜೊತೆಗಿರುವ
ಆತನ ದೊಣ್ಣೆಯು ಕೋಲು ನಿನಗೆ
ಧೈರ್ಯವ ನೀಡಿ ಮುಂದೆ ನಡೆಸುವುದು
ನಿನ್ ಎಲ್ಲ ರೋಗ ಬಾಧೆಯಿಂದ
ಮರಣಕರ ವ್ಯಾಧಿಯಿಂದಲು
ತಪ್ಪಿಸಿ ನಿನ್ನನ್ನು ಕಾಯುವನು
ನಿನ್ ರೋಗ ಎಲ್ಲ ವಾಸಿ ಮಾಡುವನು
ನನ್ನ ಮನವೇ ನೀನು ಹೆದರದಿರು
ಯೇಸುವು ನಿನ್ನೊಂದಿಗಿರುವ
ಆತ ತೂಕಡಿಸದೆ ನಿದ್ರಿಸದೆ
ಸದಾ ನಿನ್ನನ್ನು ಕಾಯುವನು (2)
ಸದಾ ನಿನ್ನನ್ನು ಕಾಯುವನು (2)
Praise the lord…can i get lyrics of this song in english and hindi .