Entha Olle Devaru Yesayya – ಎಂಥ ಒಳ್ಳೆ ದೇವರು ಯೇಸಯ್ಯಾ

Entha Olle Devaru Yesayya

ಎಂಥ ಒಳ್ಳೆ ದೇವರು ಯೇಸಯ್ಯಾ
ನನ್ನ ಚಿಂತೆಯೆಲ್ಲಾ ತೀರಿತಯ್ಯಾ ನಿನ್ನ ಸೇರಲು
ಎಂಥ ಒಳ್ಳೆ ದೇವರು ಯೇಸಯ್ಯಾ || 2 ||

ಘೋರ ಪಾಪಿ ಆದ ನಾನು
ನಿನ್ನಿಂದ ದೂರ ಹೋದಾಗ || 2 ||
ನಿನ್ನ ಪ್ರೇಮದಿ ನನ್ನ ಅಪ್ಪಿಕೊಂಡು
ಕ್ಷಮಿಸಿದಂಥ ನನ್ನ ಯೇಸಯ್ಯಾ || 2 ||

ಎಂಥ ಒಳ್ಳೆ ದೇವರು ಯೇಸಯ್ಯಾ || 2 ||
ನನ್ನ ಚಿಂತೆಯೆಲ್ಲಾ ತೀರಿತಯ್ಯಾ ನಿನ್ನ ಸೇರಲು
ಎಂಥ ಒಳ್ಳೆ ದೇವರು ಯೇಸಯ್ಯಾ || 2 ||

ನನಗಿದ್ದ ನನ್ನವರೆಲ್ಲರೂ
ನನ್ನ ಬಿಟ್ಟು ದೂರ ಹೋದರೂ || 2 ||
ಎಷ್ಟೇಷ್ಟೋ ಕಷ್ಟಗಳಿಗೆ ಗುರಿ ಮಾಡಿದರೂ
ನನ್ನ ಬಿಡಲೇ ಇಲ್ಲ ಯೇಸಯ್ಯಾ || 2 ||

ಎಂಥ ಒಳ್ಳೆ ದೇವರು ಯೇಸಯ್ಯಾ || 2 ||
ನನ್ನ ಚಿಂತೆಯೆಲ್ಲಾ ತೀರಿತಯ್ಯಾ ನಿನ್ನ ಸೇರಲು
ಎಂಥ ಒಳ್ಳೆ ದೇವರು ಯೇಸಯ್ಯಾ || 2 ||

ನೀನು ಇಲ್ಲದೆ ನಾನು
ಈ ಲೋಕದಲ್ಲಿ ಬದುಕಲಾರೆನು || 2 ||
ನನ್ನ ದೇವ ಎಂದಾದರೂ ಬಿಟ್ಟಿರುವೆಯಾ
ನನ್ನ ಬಿಡಲೇ ಇಲ್ಲ ಯೇಸಯ್ಯಾ || 2 ||

ಎಂಥ ಒಳ್ಳೆ ದೇವರು ಯೇಸಯ್ಯಾ || 2 ||
ನನ್ನ ಚಿಂತೆಯೆಲ್ಲಾ ತೀರಿತಯ್ಯಾ ನಿನ್ನ ಸೇರಲು
ಎಂಥ ಒಳ್ಳೆ ದೇವರು ಯೇಸಯ್ಯಾ

ಎಂಥ ಒಳ್ಳೆ ದೇವರು ಯೇಸಯ್ಯಾ || 2 ||
ನನ್ನ ಚಿಂತೆಯೆಲ್ಲಾ ತೀರಿತಯ್ಯಾ ನಿನ್ನ ಸೇರಲು
ಎಂಥ ಒಳ್ಳೆ ದೇವರು ಯೇಸಯ್ಯಾ

Leave a Reply

Your email address will not be published. Required fields are marked *